ಸರ್ ನಿಕೊಲಸ್ ಜೋರ್ಜ್ ವಿಂಟನ್ ಎಮ್.ಬಿ.ಇ (ಹುಟ್ಟು ನಿಕೊಲಸ್ ಜೋರ್ಜ್ ವರ್ಥೆಮ್; ೧೯ ಮೇ ೧೯೦೯ - ೧ ಜುಲೈ ೨೦೧೫) ರವರು ಆಂಗ್ಲ ದಾನಿ. ಇವರು ಎರಡನೇ ಮಹಾಯುದ್ಧದ ಆರಂಭಗೊಳ್ಳುವ ಮುನ್ನ ೬೬೯ ಯಹೂದಿ ಮಕ್ಕಳನ್ನು ಜ಼ೆಛ್ಸ್ಲೋವಾಕಿಯದಿಂದ ಕಾಪಾಡಿದರು. ಈ ಸನ್ನಿವೇಶವನ್ನು ಜ಼ೆಛ್ ಕಿಂಡರ್ ಟ್ರಾನ್ಸಪೋರ್ಟ್ ಎಂದು ಕರೆಯಲ್ಪಟ್ಟಿತು. ಇವರು ಮಕ್ಕಳಿಗಾಗಿ ಮನೆ ಮತ್ತು ಬ್ರಿಟನ್ನಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಯುದ್ಧದ ನಂತರ ವಿಂಟನ್ ಈ ಸಂಗತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ; ೧೯೮೮ರಲ್ಲಿ ಇವರ ಹೆಂಡತಿಗೆ ಅಟ್ಟದಲ್ಲಿರುವ ಒಂದು ಪುಸ್ತಕ ದೊರಕಿತು. ಅದರಲ್ಲಿ ಮಕ್ಕಳ ಪೋಷಕರ ವಿವರಣೆಯಿತ್ತು. ಇದರಿಂದ ಈ ಸಂಗತಿ ಅವರ ಹೆಂಡತಿಗೆ ಗೊತ್ತಾಯಿತು. ಇದಾದ ನಂತರ ಇವರಿಗೆ ಆಂಗ್ಲ ಶಿಂಡ್ಲರ್ ಎಂಬ ಬಿರುದು ದೊರೆಯಿತು. == ಬಾಲ್ಯ ಜೀವನ == == ಉಲ್ಲೇಖನ ==